ಚಟುವಟಿಕೆ ಸಂಖ್ಯೆ |
09 |
ಚಟುವಟಿಕೆ ಹೆಸರು |
ಮನೆಯಿಂದಲೇ ಹೇಗೆ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳವ ಬಗ್ಗೆ ಲೇಖನ |
ಕೋವಿಡ್ 19 ರ ಸನ್ನಿವೇಶದಲ್ಲಿ
ಮನುಷ್ಯನ ಜೀವನ ವಿಧಾನ, ಕಾರ್ಯಶೈಲಿ, ಕರ್ತವ್ಯ ನಿರ್ವಹಣೆ
ಶೈಲಿ, ಕರ್ತವ್ಯ
ನಿರ್ವಹಿಸುವ ಸ್ತಳ, ಮುಂತಾದವುಗಳಲ್ಲಿ
ಗಮನಾರ್ಹವಾದ ಬದಲಾವಣೆಗಳನ್ನು ನಾವು ಕಾಣಬೇಕಾಗಿ ಬಂದಿರುತ್ತದೆ. ಕೋವಿಡ್ 19 ರ ಕಾರಣದಿಂದಾಗಿ
ಸದರಿ ವೈರಸ್ಯಿನ ಸರಪಳಿಯನ್ನು ಕಡಿದು ಹಾಕಲು ಸಾರ್ವಜನಿಕರು ಒಬ್ಬರಿಗೊಬ್ಬರು ದೂರವಿದ್ದುಕೊಂಡೇ
ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ ಶಿಕ್ಷಣ
ಕ್ಷೇತ್ರದಲ್ಲಿ ಸಾಂಪ್ರದಾಯಕವಾಗಿ ಮಕ್ಕಳು ಮತ್ತು ಶಿಕ್ಷಕರು ನೇರವಾಗಿ ಮುಖಾಮುಖಿಯಾಗಿ ಒಂದು
ಸ್ಥಳದಲ್ಲಿ ಸೇರಿ ಶೈಕ್ಷಣಿಕ ಪ್ರಕ್ರಿಯೆಯನ್ನು ಪೂರ್ಣಗೊಳ್ಳುವಂತೆ ಮಾಡುತ್ತಿದ್ದರು. ಕೋವಿಡ್19ರ ಕಾರಣದಿಂದಾಗಿ
ಶಿಕ್ಷಕರು ಮನೆಯಲ್ಲೇ ಕುಳಿತು ವಿದ್ಯಾರ್ಥಿಗಳೊಂದಿಗೆ
ನಿರಂತರವಾಗಿ ಸಂಪರ್ಕದಲ್ಲಿ ಇರಬೇಕಾದ ಅವಶ್ಯಕತೆ ಇರುವುದರಿಂದ ಸಾಂಪ್ರದಾಯಿಕ ವಿಧಾನಗಳ ಬದಲಾಗಿ
ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ಕಾರಣದಿಂದಾಗಿ ಶಿಕ್ಷಕರು
ಮನೆಯಲ್ಲಿದ್ದುಕೊಂಡು ತಮ್ಮ ವೃತ್ತಿಪರತೆ ಹೆಚ್ಚಿಸಿಕೊಳ್ಳಲು ಯಾವ ವಿಧಾನಗಳನ್ನು ಅನುಸರಿಸಬೇಕು
ಎಂಬುದರ ಬಗ್ಗೆ ಅಂತರ್ಜಾಲ, ಕಂಪ್ಯೂಟರ್
ಸಾಮಾಜಿಕ ಜಾಲತಾಣಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಂಡು ನಿರಂತರವಾಗಿ ತನ್ನ
ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಶಿಕ್ಷಕರಾದವರು ನಿರಂತರವಾಗಿರಲಿ
ತೊಡಗಿಸಿಕೊಳ್ಳಬೇಕಾಗುತ್ತದೆ. ಭವಿಷ್ಯದ ದಿನಗಳಲ್ಲಿ ಶಿಕ್ಷಕ ವೃತ್ತಿಯಲ್ಲಿ ಅನೇಕ ಬದಲಾವಣೆಗಳು, ಜಾರಿಗೆ ಬರುವ
ಸಾಧ್ಯತೆ ಇರುವುದರಿಂದ ಶಿಕ್ಷಕರಾದವರು ಕೂಡ ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುವುದು
ಅವಶ್ಯಕವಾಗಿದೆ ಆ ಕಾರಣಕ್ಕಾಗಿ ಶಿಕ್ಷಕರಾದವರು ಕಂಪ್ಯೂಟರ್ ಲ್ಯಾಪ್ ಟಾಪ್ ಮುಂತಾದವುಗಳನ್ನು
ಬಳಸಿಕೊಳ್ಳುವುದರ ಬಗ್ಗೆ ಅಭ್ಯಾಸ ಮಾಡಿಕೊಳ್ಳಬೇಕು ಜೊತೆಗೆ ವ್ಯಕ್ತಿಯ ಜೀವನದ ಅವಿಭಾಜ್ಯ
ಅಂಗವಾಗಿರುವ ಜಂಗಮವಾಣಿಯ ಎಂದು ಪ್ರಸಿದ್ಧವಾಗಿರುವ ಮೊಬೈಲ್ ಫೋನನ್ನು ಪರಿಣಾಮಕಾರಿಯಾಗಿ
ಬಳಸಿಕೊಳ್ಳುವುದರ ಬಗ್ಗೆ ಪ್ರತಿಯೊಬ್ಬ ಶಿಕ್ಷಕರು ತಿಳಿದುಕೊಳ್ಳಬೇಕು ಎಂಬುದನ್ನು ಸದ್ಯದ
ಮನೆಯಿಂದ ಕಾರ್ಯನಿರ್ವಹಿಸುವ ಚಟುವಟಿಕೆ ಅಡಿಯಲ್ಲಿ ಈ ವಿದ್ಯುನ್ಮಾನ ಮಾಧ್ಯಮಗಳ ಬಳಸಿಕೊಳ್ಳುವ
ಬಗ್ಗೆ ತಿಳಿದುಕೊಳ್ಳಲಾಯಿತು. ಜೊತೆಗೆ ಶಿಕ್ಷಕರಾದವರು ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಾದ
ಇಮೇಲ್, ವಾಟ್ಸಪ್, ಟೆಲಿಗ್ರಾಂ, ಇತ್ಯಾದಿ ಕೆಲವೇ
ಕೆಲವು ಸಾಮಾಜಿಕ ಜಾಲತಾಣಗಳ ಬಗ್ಗೆ ತಿಳಿದುಕೊಂಡಿದ್ದು ಆದರೆ ಪ್ರಸ್ತುತ ಅವಧಿಯಲ್ಲಿ ಮಾನ್ಯ
ಆಯುಕ್ತರ ಸಲಹೆ ಮೇರೆಗೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ತಯಾರಿಸಿದ ಚಟುವಟಿಕೆಗಳನ್ನು
ಅಂತರ್ಜಾಲದ ಮೂಲಕ ಪ್ರಕಟಿಸಿ ಅವುಗಳನ್ನು ಶಾಶ್ವತ ದಾಖಲೆಗಳನ್ನು ಆಗಿ ಪರಿವರ್ತಿಸುವುದು
ತಿಳಿದುಕೊಂಡು ಹಾಗೂ ಇನ್ನಿತರ ಶಿಕ್ಷಕರ ತಯಾರಿಸಿದಂತಹ ಚಟುವಟಿಕೆಗಳು, ಹವ್ಯಾಸಗಳು
ಮುಂತಾದವುಗಳನ್ನು ಬ್ಲಾಗ್ ಮೂಲಕ ತಿಳಿದುಕೊಳ್ಳಲು ಸಹಾಯವಾಯಿತು. ಭವಿಷ್ಯದಲ್ಲಿ ತಯಾರಿಸಬಹುದಾದ
ಎಲ್ಲಾ ರೀತಿಯ ದಾಖಲೆಗಳನ್ನು ಬ್ಲಾಗ್ ಮೂಲಕ ಸಂರಕ್ಷಿಸಲು ಸಾಧ್ಯವಾಗುವಂತೆ ಈ ಅವಧಿಯಲ್ಲಿ
ತಿಳಿದುಕೊಳ್ಳಲು ಸಹಾಯವಾಯಿತು. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ
ಅನೇಕ ಜನ ಶಿಕ್ಷಕರಲ್ಲಿ ಸೃಜನಾತ್ಮಕತೆ ಹೊಂದಿರುವ ಹಾಗೂ ಕಲಾತ್ಮಕ ದೃಷ್ಟಿಕೋನ ಮತ್ತು
ತಂತ್ರಜ್ಞಾನ ಬಳಕೆ ಬಗ್ಗೆ ಶಿಕ್ಷಕರಿಗೆ
ತಿಳಿದುಕೊಳ್ಳಲು ಸಾಧ್ಯವಾಯಿತು. ಅದರ ಜೊತೆಗೆ ಪ್ರಸ್ತುತ ಶೈಕ್ಷಣಿಕ ವರ್ಷದ ಅವಶ್ಯಕ
ದಾಖಲೆಗಳಾದ ಸೇತುಬಂಧ ಪ್ರಶ್ನೆಪತ್ರಿಕೆಗಳು, ಪ್ರಶ್ನೆಪತ್ರಿಕೆ ಬ್ಯಾಂಕ್, ಬೋಧನೋಪಕರಣಗಳು, ತಂತ್ರಜ್ಞಾನದ ಬಳಕೆ, ತಂತ್ರಜ್ಞಾನದ ಬಳಸುವ ವಿಧಾನ, ಬೋಧನೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು
ಎಂಬುದನ್ನು ಈ ಅವಧಿಯಲ್ಲಿ ತಿಳಿದುಕೊಳ್ಳಲಾಯಿತು.
No comments:
Post a Comment