ಚಟುವಟಿಕೆ ಸಂಖ್ಯೆ |
10 |
ಚಟುವಟಿಕೆ ಹೆಸರು |
ಮಕ್ಕಳು ಸದಕಾಲ ಕಲಿಕೆಯಲ್ಲಿ
ತೊಡಗಿಕೊಳ್ಳುವಂತೆ ಮಾಡುವ
ಕಾರ್ಯತಂತ್ರ |
ವಿಜ್ಞಾನದಲ್ಲಿ ಒಂದು ಉಕ್ತಿ ಇದೆ.
" Necessity is
the mother of all invention" ಮನುಷ್ಯನ ಎಲ್ಲಾ ಅವಶ್ಯಕತೆಗಳೆ ಎಲ್ಲಾ ಆವಿಷ್ಕಾರಗಳಿಗೆ ಮೂಲ. ಕೋವಿಡ್ 19 ರ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಸದರಿ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಜೀವನ ವಿಧಾನಗಳನ್ನು ಬದಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದರಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. ಇಲ್ಲಿಯವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೇರವಾಗಿ ತರಗತಿ ಕೋಣೆಯಲ್ಲಿ ಮುಖಾಮುಖಿಯಾಗಿ ಪಾಠ ಪ್ರವಚನಗಳನ್ನು ಬೋಧಿಸುವುದು ಮತ್ತು ಕಲಿಯುವ ಪ್ರಕ್ರಿಯೆ ಜಾರಿಯಲ್ಲಿತ್ತು. ಆದರೆ, ಇಂದಿನ ಸನ್ನಿವೇಶಕ್ಕೆ ತರಗತಿ ಕೋಣೆಯಲ್ಲಿ ಮುಖಾಮುಖಿಯಾಗಿ ಪಾಠ ಮಾಡುವ ಬದಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಬೇರೆ ಸ್ಥಳದಲ್ಲಿ ಇದ್ದುಕೊಂಡು ಪಾಠ ಪ್ರವಚನಗಳನ್ನು ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದಕ್ಕಾಗಿ ನಾವು ಸಾಂಪ್ರದಾಯಿಕ ಪಾಠ ಬೋಧನೆಗೆ ಬದಲಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರಂತರವಾಗಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳನ್ನು ನಡೆಸಿಕೊಂಡು ಹೋಗಬೇಕಾದ ಅವಶ್ಯಕತೆ ಇರುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಸಮಾಜ, ಪೋಷಕರು ಹಾಗೂ ಶಿಕ್ಷಕರ ಮೇಲೆ ಇರುತ್ತದೆ.
ವಿದ್ಯಾರ್ಥಿಗಳು ನಿರಂತರವಾಗಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಅನೇಕ ತಂತ್ರಜ್ಞಾನದ ಸಾಧನಗಳ ಸಹಾಯ ಪಡೆದುಕೊಳ್ಳಬಹುದು ಹಾಗೂ ಕಲಿಕೆ ಪ್ರಕ್ರಿಯೆಯಲ್ಲಿ ಎದುರಾಗುವ ಕ್ಲಿಷ್ಟ ಸಮಸ್ಯೆಗಳನ್ನು ಶಿಕ್ಷಕರ ಗಮನಕ್ಕೆ ತಂದಿದ್ದಾದಲ್ಲಿ ಅವುಗಳನ್ನು ಶಿಕ್ಷಕರು ಪರಿಹರಿಸಿ ತಂತ್ರಜ್ಞಾನದ ಸಾಧನಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಸಾಧ್ಯವಿದೆ.
ಆಧುನಿಕ ತಂತ್ರಜ್ಞಾನದ ಬಳುವಳಿ ಗಳಾದ ಕಂಪ್ಯೂಟರ್, ಮೊಬೈಲ್ ಫೋನ್, ಇಂಟರ್ನೆಟ್ ಹಾಗೂ ಇತರೆ ಕಿರು ತಂತ್ರಾಂಶಗಳ ಮೂಲಕ ವಿದ್ಯಾರ್ಥಿಗಳು ಶಿಕ್ಷಕರು ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಿದೆ.
ಕಲಿಕೆ ಪ್ರಕ್ರಿಯೆಗಳನ್ನು ನಡೆಸಿಕೊಂಡು ಹೋಗಲು whatsapp
group call, google meet, whatsapp chat , microsoft team app, zoom app, phone
contact, youtube channels, khan academy, deeksha aap, wikipedia, worldwide web,
ಮುಂತಾದ ಅನೇಕ ತಂತ್ರಜ್ಞಾನದ ಸಾಧನಗಳ ಮೂಲಕ ಶಿಕ್ಷಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದುಕೊಂಡು ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಿದೆ..
No comments:
Post a Comment